Sunday 23 November 2014

                                             ವಿದ್ಯಾಬ್ಯಾಸ ಅಭಿವ್ರದ್ದಿ ಸೆಮಿನಾರ್ 

ನಮ್ಮ ಶಾಲೆಯಲ್ಲಿ ೨೩/೧೧/೨೦೧೪ ಆದಿತ್ಯವಾರ ಎರದುವರೆಯಿಂದ ಐದು ವರೆ ವರೆಗೆ ಸೆಮಿನಾರ್ ಜರಗಿತು ಮೀಂಜ ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ಶ್ರೀ ಅಬ್ದುಲ್ ಕರೀಂ ಇವರ ಅದ್ಯಕ್ಷತೆ ಯಲ್ಲಿ ಸೆಮಿನಾರ್ ಆರಂಭ ಗೊಂಡಿತು ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷರಾದ ಶ್ರೀ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು ಮಂಜೇಶ್ವರ ಉಪಜಿಲ್ಲಾ ವಿಧ್ಯಾದಿಕಾರಿಗಳಾದ ನಂದಿಕೇಶ ನ್ ಸರ್ ಬಿ ಪಿ ಒ ಸರ್ ಶ್ರೀ ವಿಜಯಕುಮಾರ್ ಡಿಸ್ಟ್ರಿಕ್ಟ್ ಪ್ರೊಜೆಕ್ಟ್ ಆಫೀಸರ್ ಯತೀಶ್ ಕುಮಾರ್ ರೈ ಸಿಆರ್ ಸಿ ಕೋರ್ಡಿ ನೇಟ ರ್ ರಾಣಿವಾಸುದೇವನ್ ಶಾಲಾ ಮೇನೇಜರ್ ಜಯಪ್ರಕಾಶ್ ನಾರಾಯಣ್ ಹಳೆಯ ವಿಧ್ಯಾರ್ಥಿಗಳಾದ ಕೃಷ್ಣಪ್ಪ ಪೂಜಾರಿ ಇಬ್ರಾಹಿಂ ಸರ್ ಉಪಸ್ಥಿತರಿದ್ದರು. ಶ್ರೀಮತಿ ನೀರಜಾಕ್ಷಿ ಟೀಚರ್ ಶಾಲೆಯ ವರದಿಯನ್ನು ವಾಚಿಸಿದರು.ಯಲ್ ಯಸ್ ಯಸ್ ಪಡೆದ ಪಿಯಾ ಕುಟಿನ್ಹ ಹಾಗು ವಿದ್ಯಾರಂಗದಲ್ಲಿ ಬುಲ್ ಬುಲ್ ನ ಕಥಾರಚನೆ ಚಿತ್ರರಚನೆ ಪ್ರಥಮಸ್ಥಾನ ಪಡೆದ ಅಪೂರ್ವಳಿಗೆ ಚಿತ್ರ ರಚನೆಯಲ್ಲಿ ದ್ವಿತಿಯ ಸ್ಥಾನ ಪಡೆದ ಅಮೃತ ಎ ಸಿ ಇವರಿಗೆ ಬಹುಮಾನ ವಿಥರಿಸಲಾಯಿತು.ಶಾಲಾ ಮುಖ್ಯೊಪಾದ್ಯಾಯರಾದ ಟಿ  ಡಿ ಸದಾಶಿವ ರಾವ್ ಸ್ವಾಗತಿಸಿ ವಿಜಯಲಕ್ಷ್ಮಿ ಟೀಚರ್ ದನ್ಯವಾದ ವಿತ್ತರು.ಶ್ರಿಮತಿ ರಾಜೇಶ್ವರಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು. 






Friday 14 November 2014

                 
                                                            ಮಕ್ಕಳ ದಿನಾಚರಣೆ 

ನಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಪರಿಸರ ಸ್ವಛಗೊಳಿಸಲಾಯಿತು. ಶಾಲಾ ಮುಖ್ಯೋಪಾದ್ಯಾಯರಾದ ಟಿ.ಡಿ.ಸದಾಶಿವ ರಾವ್ ಬಹುಮಾನ ವಿತರಿಸಿದರು. ಸಭೇ ಕಾರ್ಯಕ್ರಮದಲ್ಲಿ ಮಕ್ಕಳು ಚಾಚಾ ನೆಹರು ಇವರ ಪದ್ಯ ಹಾಗು ಅಬಿನಯಗೀತೆ ಹಾಡಿದರು.




                                                    ಮಕ್ಕಳದಿನಾಚರಣೆ 

ಮಕ್ಕಳದಿನಾಚರಣೆಯ ಪ್ರಯುಕ್ತ ಕಾಸರಗೋಡಿನ ಸ್ಕೌಟ್ ಭವನದಲ್ಲಿ ನಡೆಸಿದ ಪೈಂಟಿಂಗ್ ಸ್ಪರ್ದೆಯಲ್ಲಿ ನಮ್ಮ ಶಾಲೆಯ ಅಪೂರ್ವ.ಕೆ ಪ್ರಥಮ ಹಾಗು ಅಮೃತ.ಎ.ಸಿ ದ್ವಿತಿಯ ಸ್ಥಾನ ಪಡೆದರು. ದಿ.ಒ.ಸಿ ಸಾಬು ಥೋಮಸ್ ಡಿ.ಟಿ.ಸಿ ಭುವನೇಂದ್ರ ಸರ್
ಹಾಗು ಡಿಸ್ಟ್ರಿಕ್ಟ್ ಸೆಕ್ರೆಟರಿ ಕಾರ್ಮಿಲಿ ಟೀಚರ್ ಡಿ.ಟಿ.ಸಿ.ಉಷಾ ಟೀಚರ್ ಬಹುಮಾನ ವಿತರಿಸಿದರು. ಫ್ಲೋಕ್ ಲೀಡರ್ ಆದ ರಾಜೇಶ್ವರಿ ಟೀಚರ್, ಜ್ಯೋತಿ ಲಕ್ಷ್ಮಿ.ಕೆ , ಜಯಲಕ್ಷ್ಮಿ ಟೀಚರ್ ಕಲ್ಲಕಟ್ಟ ,ಪ್ರೇಮ ಟೀಚರ್ ,ಮತ್ತು ಸ್ಕೌಟ್ ಮಾಸ್ಟರ್ ವರ್ಗೀಸ್ ಸರ್ ಉಪಸ್ಥಿತರಿದ್ದರು.


Tuesday 11 November 2014

                                                         ಕೊಡುಗೆ 
ನಮ್ಮ  ಶಾಲೆಯಲ್ಲಿ ಇತ್ತೀಚೆಗೆ ದರ್ಮಸ್ಥಳ ಗ್ರಾಮ ಅಭಿವ್ರ್ ದ್ದಿಯ ಯೋಜನೆಯ ಅಧಿಕಾರಿ ಭರತ್ ಕುಮಾರ್ ಇವರು ಫ್ಯಾನ್ ನನ್ನು ಮುಖ್ಯೊಪಾದ್ಯಾಯರಾದ ಟಿ.ಡಿ ಸದಾಶಿವ ರಾವ್ ಇವರಿಗೆ ನೀಡಿದರು.