Tuesday 22 December 2015

ಪಿ.ಟಿ.ಎ ಮಹಾಸಭೆ 
೧೮-೧೨-೨೦೧೫ ಶುಕ್ರವಾರ ಪಿ.ಟಿ.ಎ ಮಹಾಸಭೆ ಜರಗಿತು.ಶಾಲಾ ಚಟುವಟಿಕೆಗಳು,ವಾರ್ಷಿಕೋತ್ಸವದ ಕುರಿತು ರಕ್ಷಕರು,ಶಾಲಾ ಮೇನೇಜರ್ ಡಾ.ಜಯಪ್ರಕಾಶ್ ನಾರಾಯಣ ಸಲಹೆಗಳನ್ನಿತ್ತರು. 



             ಕ್ರಿಸ್ ಮಸ್
ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಕ್ರಿಸ್ ಮಸ್ ಕೇಕನ್ನು ಹಂಚಲಾಯಿತು.ಹಬ್ಬದ ಮಹತ್ವ ತಿಳಿಸಲಾಯಿತು. 

Sunday 13 December 2015

ಬಾಲಕಲೋತ್ಸವದಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ ಅರೆಬಿಕಿನಲ್ಲಿ,ಕುರಾನ್ ಪಾರಾಯಣದಲ್ಲಿ ಎ ಗ್ರೇಡ್ ಲಭಿಸಿದ ಇಬ್ರಾಹಿಮ್ ಭಾತಿಸ್ ಹಾಗು ಕಥೆ ಹೇಳುವ ಸ್ಪರ್ಧೆಯಲ್ಲಿ ಎ  ಗ್ರೇಡ್ ಲಭಿಸಿದ ಎರಡನೇ ತರಗತಿಯ ಕೌಶಿಕ್ ಶೆಟ್ಟಿ ಇವರನ್ನು ಶಾಲಾ ಮುಖ್ಯೋಪಾದ್ಯಾಯರಾದ ಟಿ.ಡಿ ಸದಾಶಿವ ರಾವ್ ಅಭಿನಂದಿಸಿದರು.    


Wednesday 18 November 2015

ಮಕ್ಕಳ ದಿನಾಚರಣೆ 
ಮಕ್ಕಳ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿವಿದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 

Friday 30 October 2015

ಆರೋಗ್ಯದ ಮಾಹಿತಿ
ಶುಚಿತ್ವ ಮಾಸಾಚರಣೆಯ ಪ್ರಯುಕ್ತ ಆರೋಗ್ಯ ಹಾಗು ಶುಚಿತ್ವದ ಕುರಿತು ಡಾ ಶಂಕರನಾರಾಯಣ ಭಟ್ ಇವರು ಮಾಹಿತಿ ನೀಡಿದರು ಶಾಲಾ ಮುಖ್ಯೋಪಾದ್ಯಾಯರಾದ ಟಿ.ಡಿ.ಸದಾಶಿವ.ರಾವ್ ಉಪಸ್ತಿತರಿದ್ದರು. 

   

Thursday 22 October 2015

 ದಸರಾ ಹಬ್ಬದ ಆಚರಣೆ 
ದಸರಾ ಹಬ್ಬದ ಪ್ರಯುಕ್ತ ಶಾರದಾ ಭಜನೆ ಹಾಗು ವಿವಿಧ ಸ್ಪರ್ದೆಗಳನ್ನು ಏರ್ಪಡಿಸಲಾಯಿತು.ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. 









Saturday 3 October 2015

ಗಾಂಧೀ ಜಯಂತಿ ಆಚರಣೆ 
ನಮ್ಮ ಶಾಲೆಯಲ್ಲಿ ಗಾಂಧೀ ಜಯಂತಿ ಪ್ರಯುಕ್ತ ಶಾಲಾ ಮಕ್ಕಳು, ಬುಲ್-ಬುಲ್ ಮಕ್ಕಳು, ಅಧ್ಯಾಪಕರು ಶುಚಿತ್ವ ಕಾರ್ಯಕ್ರಮಕ್ಕೆ ಚಾಲನೆ ಯಿತ್ತರು. 

Saturday 5 September 2015

ಅದ್ಯಾಪಕರ ದಿನ 
ಅದ್ಯಾಪಕರ ದಿನದ ಪ್ರಯುಕ್ತ ದೂರದರ್ಶನದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಇವರ ಜೊತೆ ವಿದ್ಯಾರ್ಥಿಗಳ ಸಂವಾದ ವೀಕ್ಷಿಸಲಾಯಿತು.ನಮ್ಮ ಶಾಲೆಯಲ್ಲಿ ಬುಲ್-ಬುಲ್ ವಿದ್ಯಾರ್ಥಿನಿಯರು ಅದ್ಯಾಪಕರನ್ನು ಗೌರವಿಸಿದರು.ಶಾಲಾ ಮೇನೇಜರ್ ಡಾ ಜಯಪ್ರಕಾಶ್ ನಾರಾಯಣ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.


Friday 4 September 2015

ಸೂರ್ಯನ ಸುತ್ತ  ಬಾನಿನಲ್ಲಿ ಉಂಟಾದ ವಿಸ್ಮಯವನ್ನು ವೀಕ್ಷಿಸಿದರು.

Friday 21 August 2015

  ಸಂಭ್ರಮದ ಓಣಂ ಆಚರಣೆ  
ಓಣಂ ಹಬ್ಬದ ಪ್ರಯುಕ್ತ ಪೂಕಳಂ ರಚಿಸಲಾಯಿತು.ವಿವಿಧ ಆಟೋಟ ಸ್ಪರ್ದೆ ಇರಿಸಲಾಯಿತು.ಓಣಂ ಔತಣ ಕೂಟ ಏರ್ಪಡಿಸಲಾಯಿತು. 





Saturday 15 August 2015

 ಸಂಭ್ರಮದ ಸ್ವಾತಂತ್ರ್ಯೋತ್ಸವ 
ನಮ್ಮಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಾರ್ಡ್ಸಸದಸ್ಯೆಯಾದ ಶ್ರೀಮತಿ ಸರಸ್ವತಿ .ಕೆ ಧ್ವಜಾರೋಹಣ ಗೈದರು ಶಾಲಾ ಮೇನೇಜರ್ ಡಾ ಜ಼ಯಪ್ರಕಾಶ್ ನಾರಾಯಣ ಶುಭ ಹಾರೈಸಿದರು ಪಿ.ಟಿ.ಎ ಅದ್ಯಕ್ಷರಾದ ಸುಧಾಕರ ಶೆಟ್ಟಿ ಅಧ್ಯಕ್ಷಸ್ಥಾನ ಅಲಂಕರಿಸಿ ಭಾಷಣ ಮಾಡಿದರು.ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಡಿ ಸದಾಶಿವ ರಾವ್ ಸ್ವಾತಂತ್ರ್ಯೋತ್ಸವದ ಕುರಿತು ಭಾಷಣ ಮಾಡಿದರು.ಶ್ರೀಮತಿ ನೀರಜಾಕ್ಷಿ ಟೀಚರ್ ಸ್ವಾಗತಿಸಿ ಶ್ರೀಮತಿ ವಿಜಯಲಕ್ಷ್ಮಿ ಟೀಚರ್ ದನ್ಯವಾದ ವಿತ್ತರು.ಶ್ರೀಮತಿ ರಾಜೇಶ್ವರಿ ಟೀಚರ್ ಕಾರ್ಯಕ್ರಮ ನಿರೂಪರಿಸಿದರು.ಬುಲ್ ಬುಲ್ ಮಕ್ಕಳು ಶಾಲಾ ಮಕ್ಕಳು ದೇಶಭಕ್ತಿಗೀತೆ,ನೃತ್ಯ ಭಾಷಣ ಮಾಡಿದರು.   









Friday 7 August 2015

 ಸುಸಜ್ಜಿತ ಶಾಲಾ ಮೈದಾನಕ್ಕಾಗಿ ದರ್ಮಸ್ಥಳದಿಂದ ಅನುದಾನ
 ನಮ್ಮ ಶಾಲೆಗೆ ದರ್ಮಸ್ತಳ ಗ್ರಾಮಾಭಿ ವೃದ್ದಿ ಯೋಜನೆಯ ನಿರ್ದೇಶಕರಾದ ಶ್ರೀ ಸುಧೀರ್ ಕುಮಾರ್ ಹಾಗೂ ಕುಂಬಳೆ ಯೋಜನಾದಿಕಾರಿಗಳಾದ ಸಂಧ್ಯಾ.ವಿ .ಶೆಟ್ಟಿ ಶಾಲಾ ಮೈದಾನ ನಿರ್ಮಿಸಲು ಚೆಕ್ಕನ್ನು ಶಾಲಾ ಮೇನೇಜರ್ ಡಾ ಜ಼ಯಪ್ರಕಾಶ್ ನಾರಾಯಣ ಇವರಿಗೆ ಹಸ್ತಾಂತರಿಸಿದರು ಸಭೆ ಯಲ್ಲಿ ಮೇಲ್ವಿಚಾರಕರಾದ ಶ್ರೀ ವಿಶ್ವನಾಥ ಕಾರ್ಯ ಕ್ಷೇತ್ರ ನಿರೂಪಣಾದಿಕಾರಿಗಳಾದ ಸುಲೋಚನಾ ಕುಮಾರಿ ಹಾಗೂ ಮುಖ್ಯೋಪಾದ್ಯಾಯರಾದ ಟಿ ಡಿ ಸದಾಶಿವ ರಾವ್ ಉಪಸ್ತಿತರಿದ್ದರು

  
 ಸಮವಸ್ತ್ರ ವಿತರಣೆ 
ಸರಕಾರದಿಂದ ನೀಡಲ್ಪಟ್ಟ ಸಮವಸ್ತ್ರವನ್ನು ಪಿ.ಟಿ.ಎ ಅದ್ಯಕ್ಷರಾದ ಶ್ರೀ ಸುಧಾಕರ ಶೆಟ್ಟಿ ವಿದ್ಯಾರ್ಥಿಗಳಿಗೆ ವಿತರಿಸಿದರು. 

Friday 17 July 2015

 ಡೈರಿ ಬಿಡುಗಡೆ 
೨೦೧೫-೧೬ನೇ ಸಾಲಿನ ಚಟುವಟಿಕೆಗಳ ಕಿರು ಡೈರಿಯನ್ನು ವಿದ್ಯಾವರ್ದಕ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಧರ ರಾವ್ ಯಮ್.ಆರ್ ಬಿಡುಗಡೆಗೊಳಿಸಿದರು.ಶಾಲಾ ಮೆನೇಜರ್ ಡಾ.ಜಯಪ್ರಕಾಶ್ ನಾರಾಯಣ ಡೈರಿ ವಿತರಿಸಿ ಶುಭ ಹಾರೈಸಿದರು.ಪಿ.ಟಿ.ಎ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಚಂಚಲಾಕ್ಷಿ ಮಕ್ಕಳಿಗೆ ಡೈರಿ ವಿತರಿಸಿ ಶುಭ ಹಾರೈಸಿದರು ಶಾಲಾ ಮುಖ್ಯೋಪಾಧ್ಯಾಯರಾದ ಟಿ.ಡಿ ಸದಾಶಿವ ರಾವ್ ಸ್ವಾಗತಿಸಿ ವಿಜಯಲಕ್ಷ್ಮಿ ಟೀಚರ್ ದನ್ಯವಾದ ಸಮರ್ಪಿಸಿದರು ರಾಜೇಶ್ವರಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು.ಅಧ್ಯಾಪಿಕೆಯರಾದ ನೀರಜಾಕ್ಷಿ ಟೀಚರ್ ಸುಜಾತ ಟೀಚರ್,ನಯನ ಟೀಚರ್ ಸಹಕರಿಸಿದರು. 
                               

Friday 3 July 2015

 ನಮ್ಮ ಶಾಲೆಯ ಬುಲ್ ಬುಲ್ ವಿದ್ಯಾರ್ಥಿನೀಯರು ವನಮಹೋತ್ಸವ ದ ಪ್ರಯುಕ್ತ ಗಿಡಗಳನ್ನು ನೆಟ್ಟು ಪರಿಸರ ಪ್ರೇಮ ವನ್ನು ವ್ಯಕ್ತಪಡಿಸಿದರು. 

Friday 26 June 2015


                                        ವಿಶ್ವ ಮಾದಕ ವಸ್ತು ವಿರೋಧಿ ದಿನ 
ವಿಶ್ವ ಮಾದಕ ವಸ್ತು ವಿರೋದಿ ದಿನದ ಪ್ರಯುಕ್ತ ನಮ್ಮ ಶಾಲೆ ಯಲ್ಲಿ ಮೆರವಣಿಗೆ ನಡೆಸಲಾಯಿತು ಸಭಾ ಕಾರ್ಯಕ್ರಮದಲ್ಲಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಸುಧಾಕರ ಶೆಟ್ಟಿ ಇವರು ಸ್ಪರ್ಧೆ ಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು.  


Tuesday 23 June 2015

ಪಿ.ಟಿ.ಎ ಮಹಾಸಭೆ
ಪಿ.ಟಿ.ಎ  ಮಹಾಸಭೆ ನಮ್ಮ ಶಾಲೆಯಲ್ಲಿ ನೆರವೇರಿತು. ಪಿ.ಟಿ.ಎ ಅಧ್ಯಕ್ಷರಾಗಿ ಸುಧಾಕರ.ಶೆಟ್ಟಿ ಹಾಗು ಮಾತೃ ಸಂಘದ ಅದ್ಯಕ್ಷೆಯಾಗಿ ಶ್ರೀಮತಿ ಚಂಚಲಾಕ್ಷಿ ಆಯ್ಕೆ ಗೊಂಡರು. ಸಭಾಕಾರ್ಯಕ್ರಮದಲ್ಲಿ ಯಲ್.ಯಸ್.ಯಸ್ ನಲ್ಲಿ ಉತ್ತೀರ್ಣಳಾದ ಅಪೂರ್ವ.ಕೆ ಇವಳನ್ನು ಶಾಲಾ ಮೆನೇಜರ್ ಡಾ ಜಯಪ್ರಕಾಶ ನಾರಾಯಣ ಇವರು ಗೌರವಿಸಿದರು. 




Friday 19 June 2015


ವಾಚನಾ ದಿನ 
ವಾಚನಾದಿನದ ಪ್ರಯುಕ್ತ ಪುಸ್ತಕ ಪ್ರದರ್ಶನ ಏರ್ಪಡಿಸಿ ಮಕ್ಕಳು ಪುಸ್ತಕಗಳನ್ನು ತೆಗೆದು ಓದಿದರು. ಪಿ.ಯನ್ ಪಣಿಕ್ಕರ್ ಅವರ ಕುರಿತು ಮಕ್ಕಳು ತಿಳಿದುಕೊಂಡರು. ಸಬೆಯಲ್ಲಿ ಕಥೆ,ಕವಿತೆ ವಾಚಿಸಿದರು. 






  

Friday 5 June 2015

ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ೪ನೇ ತರಗತಿಯ ಮಕ್ಕಳು ಮೆರವಣಿಗೆ ನಡೆಸಿದರು. ಕೃಷಿಯಲ್ಲಿ ಆಸಕ್ತಿಯುಳ್ಳ ಶ್ರೀ ಶಂಕರ ಚಿಗುರುಪಾದೆ ಇವರು ಮಕ್ಕಳಿಗೆ ಗಿಡಗಳನ್ನು ವಿತರಿಸಿದರು.
                                                   


  
                                                  

Thursday 4 June 2015

ಕೊಡೆ ವಿತರಣೆ

                                                                                                             ನಮ್ಮ ಶಾಲೆಯಲ್ಲಿ ಕೇರಳ ಗ್ರಾಮೀಣ ಬ್ಯಾಂಕ್ ವತಿಯಿಂದ ಪ್ರಬಂಧಕರಾದ ಶ್ರೀ ವಾಸುದೇವ ನಾಯಕ್ ಮಕ್ಕಳಿಗೆಉಚಿತವಾಗಿನೀಡಿದ ಕೊಡೆಗಳನ್ನು ಶಾಲಾ ಮೆನೇಜರ ಶ್ರೀಮತಿ ಪ್ರೇಮಾ.ಕೆ.ಭಟ್ ವಿತರಿಸಿದರು. ಶಾಲಾ ಮೆನೇಜರ್ ಡಾ.ಜಯಪ್ರಕಾಶ್ ನಾರಾಯಣ ಇವರ ಅದ್ಯಕ್ಷತೆಯಲ್ಲಿ ಉಪಜಿಲ್ಲಾ ವಿದ್ಯಾದಿಕಾರಿಗಳಾದ ನಂದಿಕೇಶನ್ ಸರ್ ಹಾಗು ಡಯಟ್ ಸಂಪನ್ಮೂಲ ವ್ಯಕ್ತಿಯಾದ ಶ್ರೀ ರಘುರಾಮ್ ಭಟ್  ಮುಖ್ಕ್ಯ ಅತಿಥಿಗಳಾಗಿ ಶುಭ ಹಾರೈಸಿದರು ಶಾಲಾ ಮೇನೇಜರ್ ಪ್ರೇಮಾ.ಕೆ.ಭಟ್ ಶುಭ ಹಾರೈಸಿದರು. 

Wednesday 3 June 2015

ಶಿಕ್ಷಣ ನಮ್ಮ ಹಕ್ಕು-೩ನೇ ವರ್ಷದ ಆಚರಣೆ



Tuesday 2 June 2015

                               ಸಂಬ್ರಮದ  ಪ್ರವೇಶೋತ್ಸವ 

ಪಂಚಾಯತ್ ಮಟ್ಟದ ಪ್ರವೇಶೋತ್ಸವ ನಮ್ಮ ಶಾಲೆಯಲ್ಲಿ ನೆರವೇರಿತು. ವಾರ್ಡ್ ಮೆಂಬರ್ ಶ್ರೀಮತಿ ಸರಸ್ವತಿ ಇವರ ಅದ್ಯಕ್ಷತೆಯಲ್ಲಿ ಮೀಂಜ ಗ್ರಾಮ ಪಂಚಾಯತ್ ಅದ್ಯಕ್ಷರಾದ ಶಂಶಾದ್ ಶುಕೂರ್ ಇವರು ಉದ್ಗಾಟಿಸಿದರು ಶಾಲಾ ಮೇನೇಜರ್ ಡಾ.ಜಯಪ್ರಕಾಶ್ ನಾರಾಯಣ ಇವರು ಶುಭ ಹಾರೈಸಿದರು. ಮಕ್ಕಳಿಗೆ ಕಿಟ್ ವಿತರಿಸಲಾಯಿತು. ಪಿ.ಟಿ.ಎ ಅದ್ಯಕ್ಷರಾದ ಯೋಗೀಶ್.ಡಿ , ಬಿ.ಆರ್.ಸಿ ಟ್ರೈನರ್ ರಾಣಿ ವಾಸುದೇವನ್ ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ ಮಕ್ಕಳು ರಕ್ಷಕರು ಅದ್ಯಾಪಕರು ಭಾಗವಹಿಸಿದರು. ಹೊಸತಾಗಿ ಸೇರಿದ ಮಕ್ಕಳನ್ನು ಸಂಬ್ರಮದಿಂದ ಸ್ವಾಗತಿಸಲಾಯಿತು.  









Wednesday 1 April 2015

                                                    ಬೀಳ್ಕೊಡುಗೆ ಸಮಾರಂಭ  

ನಮ್ಮ  ಶಾಲೆಯಲ್ಲಿ ನಿವ್ರುತ್ತರಾದ ವಿಷ್ಣು ಮಯ್ಯ ಮಾಸ್ಟರ್ ಇವರನ್ನು ಶಾಲೆಯ ಅದ್ಯಾಪಕ ವೃಂದ ರಕ್ಷಕರು ಶಾಲಾ ಮೇನೇಜರ್ ಡಾ. ಜಯಪ್ರಕಾಶ್ ನಾರಾಯಣ ಗೌರವಿಸಿದರು. ನಿವ್ರುತ ಮುಖ್ಯೋಪಾದ್ಯಾಯರಾದ ಸುಬ್ರಹ್ಮಣ್ಯ ಭಟ್ ಇವರು ಸನ್ಮಾನಿಸಿದರು. ಶಾಲಾ ಮಕ್ಕಳಿಂದ ಹಾಗು ಕರ್ನಾಟಕ ಜಾನಪದ ಅಕಾಡಮಿಯ ಜಾನಪದ ಜಾತ್ರೆ ಕಾರ್ಯಕ್ರಮ ಇತ್ತು.  


  


                                                    ಬೀಳ್ಕೊಡುಗೆ ಸಮಾರಂಭ 

ಇತ್ತೀಚೆಗೆ ನಮ್ಮ ಶಾಲೆಯಲ್ಲಿ ೪ನೇ ತರಗತಿಯ ಮಕ್ಕಳ  ಬೀಳ್ಕೊಡುಗೆ ಸಮಾರಂಭ ಜರಗಿತು. ಶಾಲಾ ಮೇನೇಜರ್ ಡಾ. ಜಯಪ್ರಕಾಶ್ ನಾರಾಯಣ ಶುಭಹಾರೈಸಿದರು. 

                                        ಎಸ್ .  ಆರ್ . ಜಿ . ಸಭೆ 


     ನಮ್ಮ ಶಾಲೆಯಲ್ಲಿ  ಎಸ್ .ಆರ್ .ಜಿ ಸಭೆ ಕರೆದು ೨೦೧೫-೨೦೧೬ನೇ ಸಾಲಿನ ತರಗತಿಗಳನ್ನು ಹ ೦ಚಲಾಯಿತು.                           
                                                     
                                                 ಪ್ರಿ ಪ್ರ್ಪ್ರೈಮರಿ -ಸುಜಾತ ಟೀಚರ್
                                                ೧ನೇ ತರಗತಿ -ನೀರಜಾಕ್ಷಿ  ಟೀಚರ್ 
                                                ೨ನೇ  ತರಗತಿ -ಟಿ ಡಿ ಸದಾಶಿವ ರಾವ್(ಮುಖ್ಯೋಪಾದ್ಯಾಯರು)
                                                ೩ನೇ  ತರಗತಿ -ವಿಜಯಲಕ್ಷ್ಮಿ ಟೀಚರ್
                                                 ೪ ನೇ ತರಗತಿ -ರಾಜೇಶ್ವರಿ ಟೀಚರ್ 
                                                 ಎಸ್ ಆರ್ ಜಿ ಕನ್ವೀನರ್-ನೀರಜಾಕ್ಷಿ ಟೀಚರ್ 
                                                

Sunday 22 March 2015

                                                              ಎಕ್ಷಿ ಕ್ಯೂಟಿವ್  ಮೀಟಿಂಗ್      

ನಮ್ಮ ಶಾಲೆಯಲ್ಲಿ ೧೮ನೇ ತಾರೀಕು ಒರ್ಗನೈಸಿಂಗ್ ಮೀಟಿಂಗ್ ಕರೆದು ಕಬ್ ಬುಲ್ ಬುಲ್ ಉತ್ಸ ವದ ಆಯ -ವ್ಯಯ ಮಂಡಿಸಲಾಯಿತು  ಮತ್ತೂ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮ ಬೀಳ್ಕೊಡುಗೆ ಸಮಾರಂಬ ದ  ಕುರಿತು ಚರ್ಚಿಸಲಾಯಿತು

Tuesday 3 March 2015

                                              ತೊಟ್ಟೆ ತೋಡಿ  ಕಬ್ ಬುಲ್ ಬುಲ್ ಉತ್ಸವ 

ನಮ್ಮ ಶಾಲೆ ಯಲ್ಲಿ ಕಬ್ ಬುಲ್ ಬುಲ್ ಉತ್ಸವ ಬಹಳ ವಿಜ್ರಂ ಭ್ ಣೆ ಯಿಂದ ಜರಗಿತು ದ್ವಜಾರೋಹ ಣ ಕಾರ್ಯಕ್ರಮ ದಲ್ಲಿ ಬ್ಲೋಕ್ ಪಂಚಾಯತ್ ಅದ್ಯಕ್ಷ ರಾದ ಹರ್ಷಾದ್ ವರ್ಕಾಡಿ ಸ್ಕೌಟ್ ನ ಡಿಸ್ಟ್ರಿಕ್ಟ್ ಕಮಿಷ ನ ರ್ ಶ್ರೀಮತಿ ಸವಿತ ಟೀಚರ್  ಶಾಲಾ ಮೇನೇಜರ್ ಡಾ ಜಯಪ್ರಕಾಶ್ ನಾರಾಯಣ ಹಾಗು ರಕ್ಷಕರು ಕಬ್ಸ್ ಬುಲ್ ಬುಲ್ಸ್ ಬಾಗವಹಿಸಿದರು ಶ್ರೀ ಹರ್ಷಾದ್ ವರ್ಕಾಡಿ ಉದ್ಗಾಟಿಸಿದರು ಶ್ರೀಮತಿ ಸವಿತಾ ಟೀಚರ್ ಸ್ವಚ್ಹ ತೆಯ ಪದ್ಯ ಹಾಡಿದರು.ದಯಾಶಂಕರ್ ಇವರು ಶುಭಹಾರೈಸಿದರು.ಶಾಲಾ
ಮೇನೇಜರ್ ಡಾ ಜಯಪ್ರಕಾಶ್ ನಾರಾಯಣ   ಶುಭಹಾರೈಸಿದರು.ಮೀಂಜ ಗ್ರಾಮದ ಸದಸ್ಯರಾದ ಶ್ರೀ ಸೋಮಪ್ಪ ಇವರು ಅದ್ಯಕ್ಷ ಸ್ಥಾನವನ್ನು ಅಲಂಕರಿಸಿದರು.ಶಾಲಾ ಮುಖ್ಯೋಪಾದ್ಯಾಯರಾದ ಟಿ ಡಿ ಸದಾಶಿವರಾವ್ ಎಲ್ಲರನ್ನು ಸ್ವಾಗತಿಸಿದರು .
ಸೆಕ್ರೆಟರಿಯವರಾದ ಪೀಟರ್ ರೋಡ್ರಿಗಸ್ ದನ್ಯವಾದ ಸಮರ್ಪಿಸಿದರು.ಶ್ರೀಮತಿ ರಾಜೇಶ್ವರಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಅದ್ಯಾಪಕವ್ರೆಂದ  ಸಹಕರಿಸಿದರು.







Friday 20 February 2015

                                                                       ಶಾಲಾ ಶೈಕ್ಷಣಿಕ ಪ್ರವಾಸ
ನಮ್ಮ ಶಾಲೆಯಿಂದ ಇತ್ತೀಚೆಗೆ ಪಿಲಿಕುಳ ಹಾಗು ಕೆಲವು ಪ್ರದೇಶಗಳನ್ನು ವೀಕ್ಷಿಸಿ ವಿದ್ಯಾರ್ಥಿಗಳು ಹಲವು ವಿಷಯಗಳನ್ನು ತಿಳಿದುಕೊಂಡರು
                       



Monday 9 February 2015

                                   ಜಿಲ್ಲಾ  ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ನಮ್ಮ ಶಾಲೆಯ ಬುಲ್ ಬುಲ್

ವಿಧ್ಯಾರ್ಥಿನಿಯರು ಬಾಗವಹಿಸಿದರು
                                               

Friday 6 February 2015

                                                  ಮೆಟ್ರಿಕ್ ಶಿಬಿರ
ನಮ್ಮ  ಶಾಲೆಯಲ್ಲಿ ಮೆಟ್ರಿಕ್ ಶಿಬಿರವನ್ನು ಎಮ್ ಪಿ ಟಿ ಎ ಅದ್ಯಕ್ಷೆ ಯಾದ ಶ್ರೀಮತಿ ಸವಿತ ಕೆ ಇವರು ಉದ್ಗಾಟಿಸಿದರು ರಕ್ಷಕರು ಮಕ್ಕಳು ಅದ್ಯಾಪಕರು ಭಾ ಗವಹಿಸಿದರು
]                                                    
                                     






Monday 2 February 2015

     ನಮ್ಮ ಶಾಲೆ ಯಲ್ಲಿ ಜಿಲ್ಲಾ ಕಬ್ ಬುಲ್ ಬುಲ್  ಉತ್ಸವ್ ನಡೆಸಲು ಓರ್ಗ್ ನೈಸಿಂಗ್ ಕಮಿಟಿಯನ್ನು ಪಂಚಾಯತ್ ಅದ್ಯಕ್ಷರಾದ ಶಂಷಾದ್ ಶುಕುರ್ ಉದ್ಗಾಟಿಸಿದರು 
                                        

Monday 19 January 2015

                                                                ಮೆಟ್ರಿಕ್ ಮೇಳದ ಚಟುವಟಿಕೆ   
ನಮ್ಮ     ಮಕ್ಕಳು ಬಾರವನ್ನು    ಸ್ವತಹ ಅಳೆದು ತಿಳಿದು ಕೊಂಡರು     

Tuesday 13 January 2015

                                                              ರಕ್ಷಕರ  ಮಹಾಸಬೆ 
    ರಕ್ಷಕರ  ಮಹಾಸಬೆ ಕರೆದು ಮುಂದಿನ ಶಾಲಾ ಚಟುವಟಿಕೆಗಳಾದ ಬುಲ್ ಬುಲ್ ಉತ್ಸ್ತವ್ ಪ್ರತಿಬಾ ದಿನ ಪ್ರವಾಸದ ಕುರಿತು ಚರ್ಚಿಸಲಾಯಿತು ಮುಖ್ಯೂಪಾದ್ಯಾಯರಾದ ಟಿ .ದಿ  ಸದಾಶಿವರಾವ್ ಮೇನೇಜರ್ ಡಾ ಜಯಪ್ರಕಾಶ್ ನಾರಾಯಣ್  ಪಿ ಟಿ ಎ ಅದ್ಯಕ್ಷ ರಾದ ಯೋಗೀಶ್ ಡಿ  ಮಾತ್ರು ಮಂಡಳಿಯ ಅದ್ಯಕ್ಷೆ ಸವಿತ  ಉಪಸ್ತಿತರಿದ್ದರು ರಕ್ಷಕರು ತಮ್ಮ ಅಬಿಪ್ರಾಯ ತಿಳಿಸಿದರು

Friday 9 January 2015

                                     ENGLISH ACTIVITY 

WORD MAKING ACTIVITY FOR III AND IV STANDARD 



Wednesday 7 January 2015

                                                       ಫ್ರೀ  ಬೀಂಗ್ ಕಾರ್ಯಕ್ರಮ 
ಭಾರತ್ ಸ್ಕೌಟ್ ಎಂಡ್ ಗೈಡ್ಸ್ ನ ವೆಲ್ ಬೀಂಗ್ ಕಾರ್ಯಕ್ರಮಕ್ಕೆ ನಮ್ಮ ಶಾಲೆಯ ೬ ಬುಲ್ ಬುಲ್ ಮಕ್ಕಳು ಬಾಗವಹಿಸಿದರು ಕಾಸರಗೋಡಿನ ಉಪಜಿಲ್ಲಾ ವಿದ್ಯಾದಿಕಾರಿಗಳಾದ ರವೀ೦ದ್ರ ನಾಥ್ ಸರ್ ಡಿ ಟಿ ಸಿ ಸಾಬು ಥೋ ಮಸ್ ಹಾಗು ಉಷಾ ಟೀ ಚರ್  ಭುವನೇಂದ್ರ ಸರ್ ಇವರು ಉಪಸ್ತಿತರಿದ್ದರು  




Thursday 1 January 2015

                                                                ಮೆಟ್ರಿಕ್ ಮೇಳ 

ನಮ್ಮ  ಶಾಲೆಯಲ್ಲಿ ಮೆಟ್ರಿಕ್ ಮೇಳದ ಪ್ರಯುಕ್ತ ೩,೪ನೇ ತರಗತಿಯ ಮಕ್ಕಳು ಗಣಿತದ ಕೆಲವು ಚಟುವಟಿಕೆಗಳಲ್ಲಿ ಭಾಗವಹಿಸಿದರು ಮುಖ್ಯೋಪಾದ್ಯಾಯರಾದ ಟಿ.ಡಿ.ಸದಾಶಿವ ರಾವ್ ಶ್ರೀಮತಿ ವಿಜಯಲಕ್ಷ್ಮಿ ಟೀಚರ್ ಶ್ರೀಮತಿ ರಾಜೇಶ್ವರಿ ಟೀಚರ್ ಸೂಕ್ತ ಸಲಹೆಗಳನ್ನು ನೀಡಿದರು.