Sunday 23 November 2014

                                             ವಿದ್ಯಾಬ್ಯಾಸ ಅಭಿವ್ರದ್ದಿ ಸೆಮಿನಾರ್ 

ನಮ್ಮ ಶಾಲೆಯಲ್ಲಿ ೨೩/೧೧/೨೦೧೪ ಆದಿತ್ಯವಾರ ಎರದುವರೆಯಿಂದ ಐದು ವರೆ ವರೆಗೆ ಸೆಮಿನಾರ್ ಜರಗಿತು ಮೀಂಜ ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ಶ್ರೀ ಅಬ್ದುಲ್ ಕರೀಂ ಇವರ ಅದ್ಯಕ್ಷತೆ ಯಲ್ಲಿ ಸೆಮಿನಾರ್ ಆರಂಭ ಗೊಂಡಿತು ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷರಾದ ಶ್ರೀ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು ಮಂಜೇಶ್ವರ ಉಪಜಿಲ್ಲಾ ವಿಧ್ಯಾದಿಕಾರಿಗಳಾದ ನಂದಿಕೇಶ ನ್ ಸರ್ ಬಿ ಪಿ ಒ ಸರ್ ಶ್ರೀ ವಿಜಯಕುಮಾರ್ ಡಿಸ್ಟ್ರಿಕ್ಟ್ ಪ್ರೊಜೆಕ್ಟ್ ಆಫೀಸರ್ ಯತೀಶ್ ಕುಮಾರ್ ರೈ ಸಿಆರ್ ಸಿ ಕೋರ್ಡಿ ನೇಟ ರ್ ರಾಣಿವಾಸುದೇವನ್ ಶಾಲಾ ಮೇನೇಜರ್ ಜಯಪ್ರಕಾಶ್ ನಾರಾಯಣ್ ಹಳೆಯ ವಿಧ್ಯಾರ್ಥಿಗಳಾದ ಕೃಷ್ಣಪ್ಪ ಪೂಜಾರಿ ಇಬ್ರಾಹಿಂ ಸರ್ ಉಪಸ್ಥಿತರಿದ್ದರು. ಶ್ರೀಮತಿ ನೀರಜಾಕ್ಷಿ ಟೀಚರ್ ಶಾಲೆಯ ವರದಿಯನ್ನು ವಾಚಿಸಿದರು.ಯಲ್ ಯಸ್ ಯಸ್ ಪಡೆದ ಪಿಯಾ ಕುಟಿನ್ಹ ಹಾಗು ವಿದ್ಯಾರಂಗದಲ್ಲಿ ಬುಲ್ ಬುಲ್ ನ ಕಥಾರಚನೆ ಚಿತ್ರರಚನೆ ಪ್ರಥಮಸ್ಥಾನ ಪಡೆದ ಅಪೂರ್ವಳಿಗೆ ಚಿತ್ರ ರಚನೆಯಲ್ಲಿ ದ್ವಿತಿಯ ಸ್ಥಾನ ಪಡೆದ ಅಮೃತ ಎ ಸಿ ಇವರಿಗೆ ಬಹುಮಾನ ವಿಥರಿಸಲಾಯಿತು.ಶಾಲಾ ಮುಖ್ಯೊಪಾದ್ಯಾಯರಾದ ಟಿ  ಡಿ ಸದಾಶಿವ ರಾವ್ ಸ್ವಾಗತಿಸಿ ವಿಜಯಲಕ್ಷ್ಮಿ ಟೀಚರ್ ದನ್ಯವಾದ ವಿತ್ತರು.ಶ್ರಿಮತಿ ರಾಜೇಶ್ವರಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು. 


Friday 14 November 2014

                 
                                                            ಮಕ್ಕಳ ದಿನಾಚರಣೆ 

ನಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಪರಿಸರ ಸ್ವಛಗೊಳಿಸಲಾಯಿತು. ಶಾಲಾ ಮುಖ್ಯೋಪಾದ್ಯಾಯರಾದ ಟಿ.ಡಿ.ಸದಾಶಿವ ರಾವ್ ಬಹುಮಾನ ವಿತರಿಸಿದರು. ಸಭೇ ಕಾರ್ಯಕ್ರಮದಲ್ಲಿ ಮಕ್ಕಳು ಚಾಚಾ ನೆಹರು ಇವರ ಪದ್ಯ ಹಾಗು ಅಬಿನಯಗೀತೆ ಹಾಡಿದರು.
                                                    ಮಕ್ಕಳದಿನಾಚರಣೆ 

ಮಕ್ಕಳದಿನಾಚರಣೆಯ ಪ್ರಯುಕ್ತ ಕಾಸರಗೋಡಿನ ಸ್ಕೌಟ್ ಭವನದಲ್ಲಿ ನಡೆಸಿದ ಪೈಂಟಿಂಗ್ ಸ್ಪರ್ದೆಯಲ್ಲಿ ನಮ್ಮ ಶಾಲೆಯ ಅಪೂರ್ವ.ಕೆ ಪ್ರಥಮ ಹಾಗು ಅಮೃತ.ಎ.ಸಿ ದ್ವಿತಿಯ ಸ್ಥಾನ ಪಡೆದರು. ದಿ.ಒ.ಸಿ ಸಾಬು ಥೋಮಸ್ ಡಿ.ಟಿ.ಸಿ ಭುವನೇಂದ್ರ ಸರ್
ಹಾಗು ಡಿಸ್ಟ್ರಿಕ್ಟ್ ಸೆಕ್ರೆಟರಿ ಕಾರ್ಮಿಲಿ ಟೀಚರ್ ಡಿ.ಟಿ.ಸಿ.ಉಷಾ ಟೀಚರ್ ಬಹುಮಾನ ವಿತರಿಸಿದರು. ಫ್ಲೋಕ್ ಲೀಡರ್ ಆದ ರಾಜೇಶ್ವರಿ ಟೀಚರ್, ಜ್ಯೋತಿ ಲಕ್ಷ್ಮಿ.ಕೆ , ಜಯಲಕ್ಷ್ಮಿ ಟೀಚರ್ ಕಲ್ಲಕಟ್ಟ ,ಪ್ರೇಮ ಟೀಚರ್ ,ಮತ್ತು ಸ್ಕೌಟ್ ಮಾಸ್ಟರ್ ವರ್ಗೀಸ್ ಸರ್ ಉಪಸ್ಥಿತರಿದ್ದರು.


Tuesday 11 November 2014

                                                         ಕೊಡುಗೆ 
ನಮ್ಮ  ಶಾಲೆಯಲ್ಲಿ ಇತ್ತೀಚೆಗೆ ದರ್ಮಸ್ಥಳ ಗ್ರಾಮ ಅಭಿವ್ರ್ ದ್ದಿಯ ಯೋಜನೆಯ ಅಧಿಕಾರಿ ಭರತ್ ಕುಮಾರ್ ಇವರು ಫ್ಯಾನ್ ನನ್ನು ಮುಖ್ಯೊಪಾದ್ಯಾಯರಾದ ಟಿ.ಡಿ ಸದಾಶಿವ ರಾವ್ ಇವರಿಗೆ ನೀಡಿದರು.

Friday 31 October 2014

ಉಪಜಿಲ್ಲಾ ಮಟ್ಟದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಯ ಕಥಾ ಸ್ಪರ್ದೆ ಯಲ್ಲಿ ಪ್ರಥಮ ಸ್ಥಾನ ಗಳಿಸಿದ ನಮ್ಮ ಶಾಲೆಯ ೪ನೇ ತರಗತಿ ಯ ವಿಧ್ಯಾರ್ಥಿನಿ ಅಪೂರ್ವ ಕೆ '

Thursday 30 October 2014

                                                                  ಎಕ್ಸಿಕ್ಯುಟಿವ್ ಮೀಟಿಂಗ್
ನಮ್ಮ ಶಾಲೆಯಲ್ಲಿ ಎಕ್ಸಿಕ್ಯುಟಿವ್ ಮೀಟಿಂಗ್ ಕರೆದು ರಕ್ಷಕರಿಗೆ ಶಾಲೆಯ ಗುಣಮಟ್ಟದ ಕುರಿತು ತಿಳಿಸಲಾಯಿತು. ಬಿ.ಆರ್.ಸಿ ಟ್ರೈನರ್ ಶ್ರೀಯುತ ಸಾಲಿ ಮಾಸ್ಟರ್ ಹಾಗು ರಾಣಿ ಟೀಚರ್ ಶಾಲಾ ಮೇನೇಜರ್ ಡಾ ಜಯ ಪ್ರಕಾಶ ನಾರಾಯಣ ಹಾಗು ಮುಖ್ಯೊಪಾದ್ಯಾಯರು ಅದ್ಯಾಪಕರು ಉಪಸ್ಥಿತರಿದ್ದರು. 

Monday 20 October 2014

                                         ಎರಡನೇ ಎಸ್ ಆರ್ ಜಿ ಸಭೆ


ನಮ್ಮ ಶಾಲೆಗೆ ಬಿ ಆರ್ ಸಿ ಟ್ರೈನರ್  ಅವರಾದ  ಶ್ರೀಯುತ  ಸಾಲಿ ಮಾಸ್ಟರ್ ಹಾಗು ಶ್ರೀಮತಿ ರಾಣಿ ಟೀಚರ್ ಆಗಮಿಸಿದ್ದು ಸ್ಕೋಡ್ ರೂಪೀಕರಿಸಿದರು. ಹಾಗೂ ಕೆಲವು ಮಾಹಿತಿಗಳನ್ನು ನೀಡಿದರು. 
                                   
2013-14ನೇ ಸಾಲಿನ ಎಲ್.ಎಸ್. ಎಸ್ ಗೆ ಅರ್ಹತೆಯನ್ನು ಪಡೆದ ನಮ್ಮ ಶಾಲೆಯ ೪ನೇ ತರಗತಿಯ ವಿದ್ಯಾರ್ಥಿನಿ ಪ್ರಿಯ ಕುಟ್ಟಿನ್ಹ.

Thursday 9 October 2014

                                                  ಸ್ಪೆಷಲ್ ಎಸ್ ಆರ್ ಜಿ ಸಭೆ 

ಪೋಕಸ್ ಶಾಲೆಯಾಗಿ ಗುರುತಿಸಿದ ನಮ್ಮ ಶಾಲೆಯ ಮೊದಲ ಎಸ್ ಆರ್ ಜಿ ಸಭೆ. ಉಪಜಿಲ್ಲಾ ವಿದ್ಯಾದಿಕಾರಿಗಳಾದ ಶ್ರೀ ನಂದಿಕೇಶನ್ ಸರ್. ಬಿ ಪಿ ಒ ಇನ್ ಚಾರ್ಜ್ ವಿಜಯಕುಮಾರ್ ಬಿ ಆರ್ ಸಿ ಟ್ರೈನರ್ ರಾಣಿ ಟೀಚರ್ ಕೆಲವು ಮಾಹಿತಿಗಳನ್ನು ನೀಡಿದರು. 

Thursday 2 October 2014

ಗಾಂಧೀ  ಜಯಂತಿ ಆಚರಣೆ 

ಗಾಂಧೀ ಜಯಂತಿಯ ಪ್ರಯುಕ್ತ ಬುಲ್ -ಬುಲ್ ಮಕ್ಕಳು ಹಾಗು ಶಾಲಾ ವಿಧ್ಯಾರ್ಥಿಗಳು ಮುಖ್ಯೊಪಾದ್ಯಾಯರು ಅಧ್ಯಾಪಕ ವೃಂದದವರು ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ಇತ್ತರು. 
ಸಂಬ್ರಮದ ದಸರಾ ನಾಡಹಬ್ಬ ಆಚರಣೆ 

ದಸರಾ ನಾಡಹಬ್ಬದ ಪ್ರಯುಕ್ತ ವಿವಿದ ಸ್ಪರ್ದೆಗಳನ್ನು ಇರಿಸಲಾಯಿತು ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು ಶಾರದಾ ಪೂಜೆಯ ಪ್ರಯುಕ್ತ ಭಜನಾ ಕಾರ್ಯಕ್ರಮ ಇತ್ತು. 


Saturday 27 September 2014

        ವಾಣಿವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಲೋಗ್ ಉದ್ಗಾಟನೆಯನ್ನು ಶಾಲಾಮೇನೇಜರ್  ಡಾಕ್ಟರ್ ಜಯಪ್ರಕಾಶ ನಾರಾಯಣ ನೆರವೇರಿಸಿದರು. ಹೇರೂರು ಶಾಲೆಯ ಅದ್ಯಾಪಕರಾದ ಪ್ರವೀಣ್ ಮಾಸ್ಟರ್ ಇವರು ಮುಖ್ಯಅತಿಥಿ ಯಾಗಿ ಆಗಮಿಸಿದ್ದು ಬ್ಲೋಗ್ ಕುರಿತು ಮನವರಿಕೆ ಮಾಡಿದರು.
 


Friday 5 September 2014

ಶಿಕ್ಷಕರ ದಿನಾಚರಣೆಯಂದು ಪ್ರಧಾನ ಮಂತ್ರಿಯವರ ದೂರದರ್ಶನ ಕಾರ್ಯಕ್ರಮದ ನೇರ ಪ್ರಸಾರವನ್ನು ಮಕ್ಕಳಿಗೆ ವೀಕ್ಷಿಸಲು ಅವಕಾಶಮಾಡಿಕೊಡಲಾಯಿತು.


ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ 

ನಮ್ಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಹಿರಿಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಯುತ ಅಬ್ದುಲ್ ರಹಿಮಾನ್ ಇವರನ್ನು ಶಾಲಾ ಮ್ಯಾನೇಜರ್ ಹಾಗೂ ಮುಖ್ಯೋಪಾಧ್ಯಾಯರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಬುಲಬುಲ್ ವಿದ್ಯಾರ್ಥಿನಿಯರು ಹೂಗುಚ್ಛ ನೀಡಿ ಎಲ್ಲ ಶಿಕ್ಷಕರನ್ನು ಗೌರವಿಸಿದರು.   
ಅಧ್ಯಾಪಿಕೆ ಸುಜಾತ ಟೀಚರ್ ನಮ್ಮ ಶಾಲಾ ಅತೀ ಕಿರಿಯ ಪುಟಾಣಿಗಳೊಂದಿಗೆ  ... 


ಸಂಬ್ರಮದ ಓಣಂ ಹಬ್ಬ 

ಓಣಂ ಹಬ್ಬದ ಪ್ರಯುಕ್ತ ಬಣ್ಣದ ಹೂಗಳಿಂದ ಪೂಕ್ಕಳಂ ರಚಿಸಲಾಯಿತು. ಶಾಲೆಯ ಪುಟಾಣಿ ಮಕ್ಕಳು ಹಬ್ಬಕ್ಕೆ ಸ್ವಾಗತ ಕೋರಿದರು. ಓಣಂ ಹಬ್ಬದ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಯಲ್ಲಿ ರಕ್ಷಕರು ಮಕ್ಕಳು ಅಧ್ಯಾಪಕರು ಭಾಗವಹಿಸಿದರು. ಮಧ್ಯಾಹ್ನ ಓಣಂ  ಸದ್ಯ ಏರ್ಪಡಿಸಲಾಗಿತ್ತು.
ನಮ್ಮ ಶಾಲಾ ಅಧ್ಯಾಪಕ ವೃಂದ ನಿವೃತ್ತ ಮುಖ್ಯೋಪಾದ್ಯಾಯರು ಶ್ರೀ ಅಬ್ಧುಲ್ ರಹಿಮಾನ್ ರ ಜೊತೆಗೆ...


Friday 15 August 2014

ಸ್ವಾತಂತ್ರ್ಯ ದಿನಾಚರಣೆ 

೨೦೧೪-೧೫ ನೇ ಸಾಲಿನ  ಸ್ವಾತಂತ್ರ್ಯ ದಿನಾಚರಣೆ ಸಡಗರದಿಂದ ಜರಗಿತು.ಶಾಲಾ ಮೇನೇಜರ್  ಶ್ರೀಯುತ ಡಾ:  ಜಯಪ್ರಕಾಶ್ ನಾರಯಣರವರು ಧ್ವಜಾರೋಹಣ ಗೈದರು. ಬುಲ್ ಬುಲ್ ಮಕ್ಕಳು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ , ಭಾಷಣ , ಮುಂತಾದ ಕಾರ್ಯಕ್ರಮಗಳು ಜರಗಿತು .


Flag Hoist by Dr: Jayaprakash Narayana


Welcome speech by Vijayalaxmi..T.R.

Thursday 7 August 2014

ಸಾಕ್ಷರ ಕಾರ್ಯಕ್ರಮದ ಶಾಲಾಮಅಟ್ಟದ ಉದ್ಘಾಟನೆಯನ್ನು ಮೀಂಜ ಪಂಚಾಯತ್  ಸದಸ್ಯೆ ಸರಸ್ವತಿಯವರು  ಸಾಕ್ಷರ

 ಪುಸ್ತಕ ವನ್ನು  ಹಸ್ತಾಂತರಿಸಿ  ಉದ್ಘಾಟಿಸಿದರು . ಶಾಲಾ ಪ್ರಭಂದಕರು ಹಾಗೂ ಪಂಚಾಯತ್ ಅದ್ಯಕ್ಷರು ಉಪಸ್ತಿತರಿದ್ದರು .